ಟೈಫಾಯಿಡ್‌ನಿಂದ ಯಾರಿಗೆ ರಕ್ಷಣೆ ಬೇಕು?
ನಿಮಗೆ ರಿಸ್ಕ್ ಇಲ್ಲ ಎಂದು ನೀವು ಭಾವಿಸಿದರೆ, ನೀವು ತಪ್ಪು ತಿಳಿದುಕೊಂಡಿರಬಹುದು.

ಟೈಫಾಯಿಡ್ ಯಾರನ್ನು ಬೇಕಾದರೂ ಬಾಧಿಸಬಹುದು
ಟೈಫೈಡ್ ಜ್ವರ ತೀವ್ರವಾದದ್ದು ಹಾಡು ಮಾರಣಾಂತಿಕವಾಗಬಹುದು. ಇದು ಅಸುರಕ್ಷಿತ ನೀರನ್ನು ಕುಡಿಯುವುದರಿಂದ, ಅಸುರಕ್ಷಿತ ಆಹಾರವನ್ನು ಸೇವಿಸುವುದರಿಂದ ಅಥವಾ ಸೋಂಕಿತ ವ್ಯಕ್ತಿಯು ನಿಮ್ಮ ಆಹಾರ ಅಥವಾ ಪಾನೀಯವನ್ನು ನಿರ್ವಹಿಸುವುದರಿಂದ ಹರಡಬಹುದು.[1]

ಕುಟುಂಬಗಳು ಮತ್ತು ಮನೆಗಳು
ಟೈಫಾಯಿಡ್ ಮಲಿನವಾದ ನೀರು, ಹಸಿ ಆಹಾರ, ಮತ್ತುಅಶುಚಿಯಾದ ಜೀವನ ಸ್ಥಿತಿಯಿಂದ ಹರಡುತ್ತದೆ. ಆದ್ದರಿಂದ, ಆಹಾರವನ್ನು ಸಂಪೂರ್ಣವಾಗಿ ಬೇಯಿಸಿ ಮತ್ತು ಆಹಾರ ತಯಾರಿಸುವ ಮುನ್ನ, ತಿನ್ನುವ ಮುನ್ನ, ಮತ್ತು ಶೌಚಾಲಯ ಬಳಸಿದ ನಂತರ ಕೈಗಳನ್ನು ತೊಳೆದುಕೊಳ್ಳಿ.
ತಡೆ
- ಉತ್ತಮ ಸ್ವಚ್ಛತೆಯನ್ನು ಪಾಲಿಸಿ. ತಿನ್ನುವ ಮುನ್ನ, ಶೌಚಾಲಯ ಬಳಸಿದ ನಂತರ, ಮತ್ತು ಆಹಾರ ತಯಾರಿಸುವ ಮುನ್ನ ಕೈಗಳನ್ನು ತೊಳೆದುಕೊಳ್ಳಿ
- ಆಹಾರವನ್ನು ಸರಿಯಾಗಿ ಬೇಯಿಸಿ ಮತ್ತು ಸುರಕ್ಷಿತವಾಗಿ ಸಂಗ್ರಹಿಸಿಕೊಳ್ಳಿ.
- ಶುದ್ಧೀಕರಿಸಿದ ಅಥವಾ ಕುದಿಸಿದ ನೀರನ್ನು ಮಾತ್ರ ಕುಡಿಯಿರಿ.

ಶಾಲೆಗಳು ಮತ್ತು ಮಕ್ಕಳು
ಕೈಗಳನ್ನು ತೊಳೆಯದೇ ಊಟದ ಡಬ್ಬಿಗಳನ್ನು, ನೀರಿನ ಬಾಟಲ್‌ಗಳನ್ನು ಹಂಚಿಕೊಳ್ಳುವುದರಿಂದ ಟೈಫಾಯಿಡ್ ಹರಡಬಹುದು. ಕೈ ತೊಳೆಯುವುದನ್ನು ಪ್ರೋತ್ಸಾಹಿಸಿ, ಸುರಕ್ಷಿತ ಕುಡಿಯುವ ನೀರು ಲಭ್ಯವಿದೆಯೇ ಎಂದು ಖಾತ್ರಿಪಡಿಸಿ ಮತ್ತು ಶಾಲೆಗಳಲ್ಲಿ ಟೈಫಾಯಿಡ್ ಜಾಗೃತಿಯನ್ನು ಮೂಡಿಸಿ.
ತಡೆ
- ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯಲ್ಲಿ ಕೈ ತೊಳೆಯುವುದರ ಬಗ್ಗೆ ಜಾಗೃತಿ ಮೂಡಿಸಿ.
- ಶಾಲೆಯ ಕೆಫೆಟೇರಿಯಾದಲ್ಲಿ ಸುರಕ್ಷಿತ ಆಹಾರ ನಿರ್ವಹಣೆ ಅಭ್ಯಾಸಗಳನ್ನು ಕಾರ್ಯಗತಗೊಳಿಸಿ.
- ಸ್ವಚ್ಛ ಕುಡಿಯುವ ನೀರನ್ನು ಒದಗಿಸಿ.

ವಯಸ್ಕರು ಮತ್ತು ಹಿರಿಯ ನಾಗರಿಕರು
ವಯಸ್ಕರು ಮತ್ತು ಕಡಿಮೆ ರೋಗನಿರೋಧಕತೆ ಹೊಂದಿರುವ ಜನರಿಗೆ ಟೈಫಾಯಿಡ್ ತಗಲುವ ಅಪಾಯ ಹೆಚ್ಚಿರುತ್ತದೆ.
ತಡೆ
- ಟೈಫಾಯಿಡ್ ಲಸಿಕೆ ಪಡೆದುಕೊಳ್ಳಿ.
- ಉತ್ತಮ ಶುಚಿತ್ವವನ್ನು ಕಾಪಾಡಿಕೊಳ್ಳಿ, ಅದರಲ್ಲೂ ವಿಶೇಷವಾಗಿ ಪ್ರವಾಸ ಮಾಡುವಾಗ.
- ಬೀದಿ ಬದಿ ಆಹಾರವನ್ನು ಸೇವಿಸುವಾಗ ಎಚ್ಚರಿಕೆ ವಹಿಸಿ.

ಪ್ರವಾಸಿಗರು
ಜನಸಂದಣಿ ಇರುವ ಅಥವಾ ಅಧಿಕ ಅಪಾಯ ಇರುವ ಪ್ರದೇಶಕ್ಕೆ ಪ್ರಯಾಣಿಸಿದಾಗ ಟೈಫಾಯಿಡ್ ಸೋಂಕು ತಗಲುವ ಸಾಧ್ಯತೆ ಹೆಚ್ಚಿರುತ್ತದೆ.
ತಡೆ
- ಪ್ರಯಾಣಕ್ಕೂ ಮೊದಲು ಲಸಿಕೆ ಪಡೆದುಕೊಳ್ಳಿ.
- ಸುರಕ್ಷಿತ ಹಾಗೂ ಸಂಸ್ಕರಿಸಿದ ನೀರನ್ನು ಮಾತ್ರ ಕುಡಿಯಿರಿ.
- ಸುರಕ್ಷಿತ ಹಾಗೂ ಸಂಸ್ಕರಿಸಿದ ನೀರನ್ನು ಮಾತ್ರ ಕುಡಿಯಿರಿ.
- ಕಟ್ಟುನಿಟ್ಟಾದ ಶುಚಿತ್ವನ್ನು ಕಾಪಾಡಿಕೊಳ್ಳಿ. ಪದೇ ಪದೇ ಕೈತೊಳೆದುಕೊಳ್ಳುತ್ತಿರಿ.

ಕಚೇರಿಗಳು ಮತ್ತು ಉದ್ಯೋಗಿಗಳು
ಕೈಗಳನ್ನು ತೊಳೆದುಕೊಳ್ಳದೇ ಆಹಾರ ಮತ್ತು ಪಾನೀಯವನ್ನು ಹಂಚಿಕೊಳ್ಳುವುದು ಹಾಗೂ ಶುಚಿಯಾಗಿಲ್ಲದ ಕೆಲಸದ ಸ್ಥಳಗಳು ಅಪಾಯವನ್ನು ಹೆಚ್ಚಿಸುತ್ತವೆ. ರೋಗ ಹರಡುವುದನ್ನು ತಡೆಯಲು ಸಂಸ್ಥೆಗಳು ಶುಚಿತ್ವ ಮತ್ತು ನೈನೈರ್ಮಲ್ಯದ ಮಾನದಂಡಗಳನ್ನು ಜಾರಿಯಲ್ಲಿರಿಸಬೇಕು.
ತಡೆ
- ಕೈತೊಳೆಯುವುದು ಮತ್ತು ನೈರ್ಮಲ್ಯದ ಅಭ್ಯಾಸಗಳನ್ನು ಪ್ರೋತ್ಸಾಹಿಸಿ.
- ಶೌಚಾಲಯವನ್ನು ಸ್ವಚ್ಛವಾಗಿರಿಸಿ.
- ಕಚೇರಿಯ ಅಡುಗೆಮನೆ ಮತ್ತು ಕೆಫೆಟೇರಿಯಾಗಳಲ್ಲಿ ಆಹಾರವನ್ನು ಸುರಕ್ಷಿತವಾಗಿ ನಿರ್ವಹಿಸಿ.
ಲಸಿಕೆ ಪಡೆಯುವುದರಿಂದ ಟೈಫಾಯಿಡ್ ಜ್ವರ ಕಾಣಿಸಿಕೊಳ್ಳುವುದು ಮತ್ತು ಅದರ ಸಂಕೀರ್ಣತೆಗಳು ಗಮನಾರ್ಹವಾಗಿ ಕಡಿಮೆಯಾಗುತ್ತವೆ. ನಿಮ್ಮನ್ನು ಮತ್ತು ನಿಮ್ಮ ಸುತ್ತಲೂ ಇರುವವರನ್ನು ರಕ್ಷಿಸಲು ಇದು ಸರಳ ಹಂತವಾಗಿದೆ.
ಇಂದೇ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಉಲ್ಲೇಖಗಳು
ಹಕ್ಕುತ್ಯಾಗ: ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ ನಿಂದ ಸಾರ್ವಜನಿಕ ಜಾಗೃತಿ ಉಪಕ್ರಮ. ಈ ವೆಬ್‌ಸೈಟ್‌ನಲ್ಲಿರುವ ವಿಷಯವು ಟೈಫಾಯಿಡ್ ಬಗ್ಗೆ ಸಾಮಾನ್ಯ ಮಾಹಿತಿಯನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಇದನ್ನು ವೈದ್ಯಕೀಯ ಸಲಹೆ ಎಂದು ಪರಿಗಣಿಸಬಾರದು. ವೈದ್ಯಕೀಯ ಸ್ಥಿತಿಗೆ ಸಂಬಂಧಿಸಿದಂತೆ ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ.